Thursday, January 31, 2008

ಕಡಲು-ಕಪ್ಪೆಚಿಪ್ಪು

ಸುಮ್ಮನೆ ಕುಳಿತಿದ್ದೆ. ಬಂಡೆಗೆ ಬಂದು ಅಪ್ಪಳಿಸುತ್ತಿದ್ದ ಬೆಳ್ಳಗಿನ ನೀರು ಹೊಸ ಸ್ವರವೊಂದನ್ನು ಸೃಷ್ಟಿಸಿತ್ತು. ಶ್ರುತಿ ಹಿಡಿಯಲು ಪ್ರಯತ್ನಿಸಿದೆ. ತಾರದಲ್ಲಿತ್ತು. ಇಲ್ಲ, ಸಾಧ್ಯವಿಲ್ಲ ಎಂದು ಮತ್ತೆ ಸುಮ್ಮನಾದೆ. ಸುತ್ತೆಲ್ಲಾ ಮರಳು. ಅದರೊಳಗೆ ಅದೇನೇನೋ ಆಕಾರಗಳು. ಚಿಕ್ಕವಳಿದ್ದಾಗ ಮನೆಯ ಮುಂದಿದ್ದ ಮರಳ ರಾಶಿಯಿಂದ ಆಯುತ್ತಿದ್ದ ಆಕಾರಗಳವು. ಇನ್ನೂ ಹಾಗೇ ಇದ್ದವು. ಅರೆ! ನಾನೀಗ ಅವುಗಳ ಆಯುವುದೇ ಇಲ್ಲವಲ್ಲ? ಅದೆಷ್ಟು ಬೇಗ ಬೆಳೆಯುತ್ತೇವೆ ಎಂದೆನಿಸಿ ಹಾಗೇ ಮುಳುಗುತ್ತಿರುವ ಸೂರ್ಯನ ನೋಡುತ್ತಿದ್ದೆ. ದೂರದಲ್ಲಿ ಪುಟ್ಟ ಮಕ್ಕಳಿಬ್ಬರು ತಾರದಲ್ಲಿ ಕೂಗುತ್ತಾ ಕಪ್ಪೆಚಿಪ್ಪು ಹೆಕ್ಕುತ್ತಿದ್ದರು!

5 comments:

ಶ್ರೀನಿಧಿ.ಡಿ.ಎಸ್ said...
This comment has been removed by a blog administrator.
ಚಿತ್ರಾಕರ್ಕೇರಾ, ದೋಳ್ಪಾಡಿ said...

ಏಕಾಂತದಲ್ಲಿ ಕುಳಿತು..ಭಾವನೆಗಳನ್ನು ಅಕ್ಷರಗಳಿಂದ ಪೋಣಿಸುವ ನಿಮ್ಮ ಕಾರ್ಯ ಮುಂದುವರಿಯಲಿ. ಶುಭವಾಗಲಿ..ಹೀಗೆ ಬರೇತೀತಿ..ನಾವೂ ಓದುತ್ತಾ ಇರ್ತೀವಿ..
ಚಿತ್ರಾ

ತನ್ ಹಾಯಿ said...
This comment has been removed by the author.
ತನ್ ಹಾಯಿ said...

ಧನ್ಯವಾದಗಳು ಚಿತ್ರಾ..

Chaithrika said...

ಚೆನ್ನಾಗಿದೆ.