ಬಚ್ಚಿಟ್ಟ ನವಿಲುಗರಿಯಲಿ ಕಂಡ ಮುಖವ ನೋಡುತ್ತಾ
ಮೆಲ್ಲಗೆ ನಕ್ಕರೆ
ಅದು ಪ್ರೀತಿ
ಮನದ ಬೆಳದಿಂಗಳಲಿ
ಉಸಿರಿನಲೆ ಕನಸ ಹಂಚಿಕೊಂಡರೆ
ಅದು ಪ್ರೀತಿ
ಒಲುಮೆ ದೀಪದ ಸೊಡರಲಿ
ಕ್ಷಣ ಕ್ಷಣವೂ ಹಿತವಾಗಿ
ಉರಿದು ಹೋಗುವುದು ಪ್ರೀತಿ
ಎಲ್ಲಿಯ ಮೂಢ ಜಗತ್ತು..
ಪ್ರೇಮದರ್ಚನೆಗೂ ಇಲ್ಲೊಂದು ದಿನ
Thursday, February 14, 2008
Subscribe to:
Post Comments (Atom)

1 comments:
ಏಕಾಂತ ಪ್ರಿಯರೆ,
ನಿಮ್ಮ ಪ್ರತಿ ಸಾಲುಗಳು ತುಂಬಾ ಮುದ್ದಾಗಿವೆ. ನಿಮ್ಮ ಬ್ಲಾಗ್ ನ ಕೊಂಡಿಯನ್ನು ನಾನು ಎರವಲು ಪಡೆದಿದ್ದೇನೆ, ನಿಮ್ಮ ಅನುಮತಿ ಕೇಳದೆ, ಬೇಸರವಾದರೆ ಕ್ಷಮೆಯಿರಲಿ.
-ರಾಜೇಶ್ ಮಂಜುನಾಥ್
Post a Comment