Saturday, February 16, 2008

ಮಾಯಾನಗರಿ

ಎಸಿ ರೂಮಿನ ಒಳಗೆ ಕಾಲಕ್ಕೆ ಬೆಲೆ ಇಲ್ಲ
ಹಗಲು ರಾತ್ರಿಗಳೆಲ್ಲ ಒಂದೆ ಇಲ್ಲಿ
ಕಪ್ಪು ರಾತ್ರಿಗೆ ಇಲ್ಲಿ ಬೆಳಗಾದ ಭಯವಿಲ್ಲ
ಹಗಲ ಭೂಮಿಗೆ ಇಲ್ಲಿ ಬಿಸಿಲೆ ಇಲ್ಲ

ಹೊರಗೆ ಅಪರೂಪಕ್ಕೆ ಕೋಗಿಲೆಯ ದನಿಯಂತೆ
ಕೀ ಬೋರ್ಡ ಶಬ್ದದಲಿ ಒಂದೆ ರಾಗ
ಸೂಟು ಬೂಟಿನ ಒಳಗೆ ಸೆಂಟಾದ ದೇಹಗಳು
ಇವರೆಲ್ಲಾ ಮಗು ಬರೆದ ಚಿತ್ರದಂತೆ!

ಸಿಗ್ನಲ್ಲು ಟ್ರಾಫಿಕ್ಕು ಪಾರ್ಕು ಪಬ್ಬುಗಳಲ್ಲಿ
ಕಳೆದು ಹೋದವು ಇನ್ನರ್ಧ ವರ್ಷ
ಓಘ ಬೋಗದ ನಡುವೆ ಭಾವಕ್ಕೆ ಬೆಲೆ ಇಲ್ಲ
ಬದುಕೆ ಹೊಂದಾಣಿಕೆ ಇಲ್ಲಿ
ಇದು ಮಾಯಾನಗರಿ!

4 comments:

ಶ್ರೀನಿಧಿ.ಡಿ.ಎಸ್ said...

chennagide:)

ಚಿತ್ರಾ ಸಂತೋಷ್ said...

ಬದುಕಿನ ನಗ್ನ ಸತ್ಯಗಳಿಗಿದು ಕೈಗನ್ನಡಿ...ಚೆನ್ನಾಗಿ ಬರೀತೀರಾ..

ನಾವಡ said...

ತನ್ ಹಾಯಿಗೆ
ಚೆನ್ನಾಗಿದೆ ನಿಮ್ಮ ಬ್ಲಾಗ್.
ಕಪ್ಪು ರಾತ್ರಿಗೆ ಬೆಳಕಾದೆಂಬ ಭಯವಿಲ್ಲ- ಸಾಲು ಚೆನ್ನಾಗಿದೆ.
ಎರಡು ಇಮೇಜ್ ಗಳನ್ನು ಚೆನ್ನಾಗಿ (ಬ್ಯೂಟಿಪಾರ್ಲರ್ ಹುಡುಗಿ,ಕಪ್ಪೆಚಿಪ್ಪು) ಬರೆದಿದ್ದೀರಿ. ಅಂಥವುಗಳನ್ನು ಮತ್ತಷ್ಟು ಬರೆಯಿರಿ.
ನಾವಡ

ತನ್ ಹಾಯಿ said...

@ಶ್ರೀನಿಧಿ, ಚಿತ್ರಾ
ಧನ್ಯವಾದಗಳು..

@ನಾವಡ ಅವರೇ,
ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಕ್ಕೆ ಕೃತಜ್ಞತೆಗಳು.