Wednesday, March 5, 2008

ಬೋರ್ಡು

ಮುನಿಯಪ್ಪ ಫೂಟ್ ವೇರ್. ಹಸಿರು ಬಣ್ಣದ ಸಣ್ಣ ಪೆಟ್ಟಿಗೆಯಂತಹ ಅಂಗಡಿಯ ಎದುರುಗಡೆ ಹಳದಿ ದಪ್ಪಕ್ಷರಗಳಲ್ಲಿ ಬೋರ್ಡು ಬರದಿತ್ತು. ಪೆಟ್ಟಿಗೆಯ ಗೋಡೆಯ ಹೊರಭಾಗದಿಂದ 'ಕರ್ನಾಟಕ ಚರ್ಮ ಕೈಗಾರಿಕಾ ನಿಗಮ ನಿಯಮಿತ' ಎಂಬ ಮತ್ತೊಂದು ಹಳದಿ ಬಣ್ಣದ ಬರಹ. ಬೆಳಿಗ್ಗೆ 9 ಕಳೆದದ್ದರಿಂದ ಪೆಟ್ಟಿಗೆಯ ಬಾಗಿಲು ತೆರೆದಿತ್ತು. ಇಲ್ಲವೆಂದಲ್ಲಿ ಮುಚ್ಚಿದ ಬಾಗಿಲ ಮೇಲೆ 'ಪೋಲಿಯೊ ಲಸಿಕೆ ಹಾಕಿಸಿ', 'ಶಿಕ್ಷಣ ಪ್ರತಿಯೊಬ್ಬನ ಹಕ್ಕು', 'ಸ್ವಚ್ಛ ಗ್ರಾಮ, ಸ್ವಚ್ಛ ದೇಶ' ಎಂಬ ವಿಧ ವಿಧದ ಬಣ್ಣಗಳು ಕಾಣಿಸುತ್ತಿದ್ದವು.

ದೊಡ್ಡದೊಂದು ಗುಲ್ ಮೊಹರ್ ಮರದ ಕೆಳಗಿರುವ ಈ ಚಪ್ಪಲಿ ರಿಪೇರಿ ಅಂಗಡಿಯನ್ನು ಎಷ್ಟು ಹೊತ್ತಿಗೆ ನೋಡಿದರೂ ತಂಪಾಗಿಯೇ ಕಾಣುತ್ತದೆ. ಅಂಗಡಿಯ ಮುಂದೆ ಪುಟ್ಟದೊಂದು ಮರದ ಸ್ಟೂಲು. ಹರಿದ ಚಪ್ಪಲಿಯನ್ನು ಮುನಿಯಪ್ಪ ಹೊಲಿದು ಕೊಡುವ ತನಕ ಅಲ್ಲಿ ಕೂರಬಹುದು. ಅರೆ ! ಆತನ ಹೆಸರು ಮುನಿಯಪ್ಪನೇ? ಅವನ ಅಪ್ಪನದೋ, ಅಜ್ಜನದೋ ಹೆಸರನ್ನಿಟ್ಟಿರಬಾರದು ಅಂಗಡಿಗೆ ಎಂದೇನೂ ಇಲ್ಲವಲ್ಲ? ಆದರೆ ಅಂಗಡಿಯೊಳಗೆ ತೀರಿಕೊಂಡ ಆತನ ಅಮ್ಮನ ಫೋಟೋ ಬಿಟ್ಟರೆ ಆಂಜನೇಯ ಸಂಜೀವಿನಿ ಹೊತ್ತು ಸಾಗುತ್ತಿರುವ ಫೋಟೋ ಒಂದಿದೆ. ದಿನವೂ ಆ ಫೋಟೋಗಳಿಗೆ ಪೂಜೆ ಮಾಡಿದ ನಂತರವೇ ಆತ ಚಪ್ಪಲಿ ರಿಪೇರಿಗೆ ಶುರುವಿಡುವುದು. ಹಾಗಾಗಿ ಎಲ್ಲರೂ ಆತನನ್ನು ಮುನಿಯಪ್ಪ ಫೂಟ್ ವೇರ್ ಎಂದೇ ಕರೆಯುವುದು.

ಬಹುಶಃ ಆತನಿಗೆ ಗಿಡ ನೆಡುವುದರಲ್ಲಿ ಆಸಕ್ತಿ ಇರಬೇಕು. ಇರುವ ಐದಡಿ ಅಗಲದ ಸ್ಥಳದಲ್ಲೇ 3-4 ಹೂಕುಂಡಗಳನ್ನು ಇಟ್ಟುಕೊಂಡು ಅದರಲ್ಲಿ ಅದ್ಯಾವ್ಯಾವುದೋ ನಮೂನೆಯ ಬಳ್ಳಿ ಹಬ್ಬಿಸಿಕೊಂಡಿದ್ದಾನೆ. ಆತನಿಗೆ ಹೆಚ್ಚೂ ಅಂದರೆ ಮೂವತ್ತಾಗಿರಬಹುದು. ಒಳ್ಳೆ ಸ್ಥಳ ನೋಡಿಯೇ ಅಂಗಡಿ ತೆರೆದಿದ್ದಾನೆ. ಇದು ಬಸ್ ಸ್ಟ್ಯಾಂಡ್ ಪಕ್ಕದಲ್ಲಿ ಗಿಜಿಗಿಜಿ ಎನ್ನುವ ರಿಪೇರಿ ಅಂಗಡಿಯ ತರಹ ಇಲ್ಲ. ಅಂಗಡಿಯ ಹಿಂದೊಂದು ಖಾಲಿ ಜಾಗವಿದೆ. ಅಲ್ಲೇ ಇಡೀ ಊರಿನ ಕಸ ಹಾಕುವುದು. ಹಾಗಾಗಿ ಅಂಗಡಿ ಎದುರಿಗೊಂದು ತಳ್ಳುಗಾಡಿಯೋ, ಕಸ ತುಂಬಿದ ಲಾರಿಯೋ ಇದ್ದೇ ಇರುತ್ತದೆ. ಸುಸ್ತಾದ ಆ ಗಾಡಿಯ ಮಂದಿಗೆಲ್ಲಾ ನೀರು ಸಪ್ಲೈ ಮಾಡುವುದೂ ಆತನಿಗೆ ರೂಢಿ. ಒಟ್ಟೂ ಆತ ಖಾಲಿ ಕುಳಿತದ್ದಿಲ್ಲ. ಆತನ ಅಂಗಡಿ ಎದುರು ಬರುತ್ತಲೇ ಚಪ್ಪಲಿ ಹಾಳಾಗುತ್ತದೋ ಅಥವಾ ಅಂಗಡಿ ನೋಡುತ್ತಲೇ ಸುಮ್ಮನೆ ಇರಲಿ ಎಂದು ಚಪ್ಪಲಿಗೆ ನಾಕು-ನಾಕು ಹೊಲಿಗೆ ಹಾಕಿಸುತ್ತಾರೋ? ಏನೋ ಒಂದು. ವ್ಯಾಪಾರ ಚೆನ್ನಾಗೇ ಇರಬೇಕು. ಇತ್ತೀಚೆಗೆ ಹೊಸ ಸೈಕಲ್ ಅಂಗಡಿ ಮುಂದೆ ಬಂದು ನಿಂತಿದೆ.

ಅಂಗಡಿಯ ಹಿಂದಿನ ಖಾಲಿ ಜಾಗದ ಮುಂದಿರುವ ಪುಟ್ ಪಾತ್ ಮೇಲೆ ಮಧ್ಯಾಹ್ನವಾಗುತ್ತಲೇ ಒಂದಷ್ಟು ಕೆಲಸದ ಹೆಂಗಸರು ತಮ್ಮ ಅನ್ನದ ಬುತ್ತಿ ಬಿಚ್ಚುತ್ತಿದ್ದಂತೆ ತಾನೂ ಊಟ ಮಾಡಬೇಕೆಂಬುದು ಆತನಿಗೆ ನೆನಪಾಗುತ್ತದೆ. ಕಸದ ಲಾರಿ ಡ್ರೈವರ್ ಬರುತ್ತಲೇ ಮಧ್ಯಾಹ್ನ ಮೂರು ಕಳೆಯಿತು ಎಂಬುದೂ ಗೊತ್ತಾಗುವುದು.

ಶಾಲೆಯಿಂದ ಮನೆಗೋಡುತ್ತಿರುವ ಪೋರ, ಗೇರುಬೀಜ ಫ್ಯಾಕ್ಟರಿಯಿಂದ ಹೊರಟು ಬಸ್ಸೇರಿದ ಹುಡುಗಿ, ದಿನವಿಡೀ ಕೆಲಸವಿಲ್ಲದೆ ಬೀದಿ ಸುತ್ತುವ ಅಬ್ಬೇಪಾರಿ, ಅಲ್ಲೇ ಮರದ ನೆರಳಲ್ಲಿ ಕೂತು ಬುಟ್ಟಿ ನೇಯುವ ಹೆಂಗಸರು.... ಬೆಳಿಗ್ಗೆ ರಸ್ತೆ ಗುಡಿಸುವ ಮಾಲಿಯ ಮೈಯ ದೂಳಿನಿಂದ ಹಿಡಿದು ಕಾರಿನಿಂದಿಳಿದು ಶೂ ಹೊಲಿಸಿಕೊಳ್ಳುವ ಟೈ ಮಹಾಶಯನ ಸೆಂಟ್ ವರೆಗೆ ಆತನಿಗೆ ಎಲ್ಲವೂ ಪರಿಚಯ.

ಕೆಲಸವೇ ಇಲ್ಲ, ಸ್ಟೂಲು ಖಾಲಿ, ನೀರು ಕುಡಿಯಲು ಯಾರೂ ಬಂದಿಲ್ಲ ಎಂದಾಗ ತನ್ನ ಅಂಗಡಿಯ ಮುಂದಿನ ರಸ್ತೆಯ ತುದಿಗಿರುವ ಎಲೆಕ್ಟ್ರಾನಿಕ್ ಬೋರ್ಡ್ ನ ಬದಲಾಗುತ್ತಿರುವ ಜಾಹೀರಾತು ನೋಡುತ್ತಾ ಕುಳಿತುಕೊಳ್ಳುತ್ತಾನೆ.

ಆತನ ಹೆಸರು ಮುನಿಯಪ್ಪ ಫೂಟ್ ವೇರ್ !

15 comments:

ಅಮರ said...

ಪ್ರಿಯ ತನ್ ಹಾಯಿ ಅವರೇ,

ನಮಸ್ಕಾರ. ಹೇಗಿದ್ದೀರಿ?

ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ 'ಪ್ರಣತಿ', ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು

ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಅಲ್ಲಿ ಸಿಗೋಣ,
ಇಂತಿ,

- ಅಮರ

ತನ್ ಹಾಯಿ said...

ಈ ಹೊಸ ಪ್ರಯತ್ನ ನಿಜಕ್ಕೂ ಬ್ಲಾಗಿಗರಿಗೆ ಖುಷಿಯ ಹುಟ್ಟಿಸುವಂತಹುದು. ಖಂಡಿತ ಸಿಗೋಣ. ಕುಳಿತು ಮಾತಾಡೋಣ.

ಮೃಗನಯನೀ said...

narrration has got a easy flow widin itself.. nice.. try to give isights...

ತನ್ ಹಾಯಿ said...

ಮೆಚ್ಚುಗೆಗೆ ಧನ್ಯವಾದ ಮೃಗನಯಿನೀ. ಆದರೆ ಎಂತಹ ಒಳನೋಟ ಎಂದು ತಿಳಿಯಲಿಲ್ಲ.

ನಾವಡ said...

ತನ್ ಹಾಯಿಯವರೇ,
ಚೆನ್ನಾಗಿದೆ. ಹೀಗೆ ಒಂದು ಚಿತ್ರಿಕೆಯ ಸುತ್ತ ವಿವರಿಸುತ್ತಾ ಹೊಸ ಹೊಸ ನೋಟಗಳನ್ನು ಹೇಳುವ ಬರಹ ತೀರಾ ಕಡಿಮೆ. ಇನ್ನಷ್ಟು ಬರೆಯಿರಿ.ನಾವು ಕಾಯುತ್ತಿರುತ್ತೇವೆ.
ನಾವಡ

ತನ್ ಹಾಯಿ said...

@ ನಾವಡ
ಮೆಚ್ಚುಗೆಯ ನುಡಿಗೆ ಧನ್ಯವಾದಗಳು. ನಿಮ್ಮ ನಿರೀಕ್ಷೆಯನ್ನು ಹುಸಿಗೊಳಿಸುವುದಿಲ್ಲ.

Karthik CS said...

ಚೆನ್ನಾಗಿದೆ ಕಣ್ರೀ ... ನನ್ ಚಪ್ಲಿ ಹೊಲಿಸ್ಕೋಬೇಕಿತ್ತು.. ಮುನಿಯಪ್ಪನ ಅಂಗಡಿಗೆ ಹೋಗ್ ಬರ್ತೀನಿರಿ..

surya said...
This comment has been removed by a blog administrator.
surya said...
This comment has been removed by a blog administrator.
surya said...

ಕಥೆ ಸರಳ ಭಾಷೆಯ ಸುಂದರ ಅಭಿವ್ಯಕ್ತಿ. ಅಭಿನಂದನೆಗಳು.

ತನ್ ಹಾಯಿ said...

@ karthik,
ಆದಷ್ಟು ಬೇಗ ಚಪ್ಲಿ ಹೊಲಿಸಿಕೊಳ್ಳಿ :)

@ಸೂರ್ಯ
ಧನ್ಯವಾದಗಳು..

bhadra said...

ಬೇಗ ಚಪ್ಪಲಿ ಹೊಲೆಯಬೇಡ ಅಂತ ಮುನಿಯಪ್ಪನಿಗೆ ಹೇಳ್ಬೇಕು
ಇಲ್ದೇ ಇದ್ರೆ ಆತನ ಸನಿಹ ತಪ್ಪಿ ಹೋಗುವುದು
ಅದಲ್ಲದೇ ಇದ್ದರೆ, ಕಿತ್ತು ಹೋಗಿರೋ ಚಪ್ಪಲಿಯನ್ನೇ ಸವೆಸುತ್ತಿದ್ದರೆ ಇನ್ನೂ ಒಳ್ಳೆಯದು
ಆಗಾಗ ರಿಪೇರಿಗೆ ಅಂತ ಹೋಗ್ತಾ ಇರಬಹುದು :)

ಬ್ಲಾಗ್ ಬಹಳ ಚೆನ್ನಾಗಿದೆ. ಆಗಾಗ್ಯೆ ಬರುವೆ

ಒಳ್ಳೆಯದಾಗಲಿ

ಗುರುದೇವ ದಯಾ ಕರೊ ದೀನ ಜನೆ

deepu said...

supper...kald hogo haagide..ista agoytu..nana nim fan agode..

ವಿ.ರಾ.ಹೆ. said...

2 tinglu agoythu, next posting barli

ಜಾತ್ರೆ said...

Registration- Seminar on the occasion of kannadasaahithya.com 8th year Celebration

Dear Sugandha,

On the occasion of 8th year celebration of Kannada saahithya.

com we are arranging one day seminar at Christ college.

As seats are limited interested participants are requested to

register at below link.

Please note Registration is compulsory to attend the seminar.

If time permits informal bloggers meet will be held at the same venue after the seminar.

For further details and registration click on below link.

http://saadhaara.com/events/index/english

http://saadhaara.com/events/index/kannada



Please do come and forward the same to your like minded friends
-kannadasaahithya.com balaga